ಮೋನಿಕಾ ಅನ್ನಾ ಮರಿಯಾ ಬೆಲೂಚಿ (ಜನನ ೩೦ ಸೆಪ್ಟೆಂಬರ್ ೧೯೬೪) ಇವರು ಇಟಾಲಿಯನ್ ನಟಿ ಹಾಗೂ ಫ್ಯಾಷನ್ ರೂಪದರ್ಶಿ. == ವೈಯಕ್ತಿಕ ಜೀವನ == ಇಟಲಿಯ ಉಂಬ್ರಿಯಾದಲ್ಲಿನ Città ಎಂಬಲ್ಲಿ ಬೆಲೂಚಿಯವರ ಜನನವಾಯಿತು , ಇವರು, ಟಕ್ಕಿಂಗ್ ಕಂಪನಿಯ ಮಾಲೀಕರಾದ ಲೂಗಿ ಬೆಲೂಚಿ ಹಾಗೂ ವರ್ಣ ಚಿತ್ರಗಾರ್ತಿ ಮರಿಯಾ ಗುಸ್ಟಿನೆಲ್ಲಿ ದಂಪತಿಗಳ ಪುತ್ರಿಯಾಗಿದ್ದಾರೆ. ಬೆಲೂಚಿಯವರು ತಮ್ಮ ೧೬ನೆಯ ವಯಸ್ಸಿನಲ್ಲಿ classicoಗೆ ಹೋಗುತ್ತಿದ್ದಾಗ ಮಾಡೆಲಿಂಗ್ ಮಾಡಲು ಪ್ರಾರಂಬಿಸಿದರು ಮೊದಲಿಗೆ ಆಕೆ ವಕೀಲ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು, ಯೂನಿವರ್ಸಿಟಿ ಆಫ್ ಪೆರುಗಿಯಾಗೆ ಶೈಕ್ಷಣಿಕ ಶುಲ್ಕ ಪಾವತಿಸುವುದಕ್ಕಾಗಿ ಮೊದಲ ಬಾರಿ ಮಾಡೆಲಿಂಗ್ ಮಾಡಿದರು, ಆದರೆ ಆಕೆಯ ಜೀವನಶೈಲಿಯು ಕಾನೂನು ಅಭ್ಯಾಸದಿಂದ ದೂರ ಉಳಿಯುವಂತೆ ಮಾಡಿತು. ಆಕೆ ಇಟಾಲಿಯನ್, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು, ಸ್ಪ್ಯಾನಿಶ್‌ನಲ್ಲಿ ಕೂಡಾ ಸ್ವಲ್ಪ ಮಾತನಾಡಬಲ್ಲರು ಹಾಗೂ ಆಕೆ ಈ ಭಾಷೆಗಳಲ್ಲಿ ಹಾಗೂ ಅರಮಾಯಿಕ್‌ನಲ್ಲಿ ಕೂಡಾ ಮಾತನಾಡುವ ಮೇರಿ ಮಗ್ಡಲೆನ್ ಪಾತ್ರದಲ್ಲಿ ದಿ ಪ್ಯಾಶನ್ ಆಫ್ ದ ಕ್ರಿಸ್ಟ್ ನಲ್ಲಿ ಕಾಣಿಸಿಕೊಂಡಳು. ಬೆಲೂಚಿಯು ಫ್ಯಾಷನ್ ಛಾಯಾಚಿತ್ರಗ್ರಾಹಕ ಕ್ಲಾಡಿಯೋ ಕಾರ್ಲೋಸ್ ಬಸ್ಸೊರನ್ನು ೧೯೯೦ರಲ್ಲಿ ವಿವಾಹವಾದರು. ನಂತರದಲ್ಲಿ ಅವರ ಜೊತೆಗೆ ಬಹಳಷ್ಟು ಚಿತ್ರಗಳಲ್ಲಿ ಸಹನಟನಾಗಿ ಅಭಿನಯಿಸಿದ ವಿನ್ಸೆಂಟ್ ಕ್ಯಾಸೆಲ್‌ರನ್ನು ವಿವಾಹವಾದರು, ಹಾಗೂ ಇವರಿಗೆ ದೇವಾ (ಜನನ ೨೦೦೪ರ ಸೆಪ್ಟೆಂಬರ್ ೧೨) ಹೆಸರಿನ ಒಬ್ಬ ಮಗಳಿದ್ದಾಳೆ. ಈ ಜೋಡಿಯು ೨೦೧೦ರ ವಸಂತಕ್ಕೆ ತಮ್ಮ ಎರಡನೆಯ ಮಗುವಿನ ಆಗಮನವನ್ನು ಎದುರು ನೋಡುತ್ತಿದೆ. ವೀರ್ಯಾಣುಗಳನ್ನು ಇನ್ನೊಬ್ಬರಿಂದ ಪಡೆದು ಮಗು ಹೊಂದುವುದನ್ನು ವಿರೋಧಿಸುವ ಇಟಾಲಿಯನ್ ಕಾನೂನನ್ನು ಪ್ರತಿಭಟಿಸುವುದಕ್ಕಾಗಿ, ೨೦೦೪ರಲ್ಲಿ ಬೆಲೂಚಿಯವರು ಗರ್ಭಿಣಿಯಾಗಿದ್ದಾಗ ಇಟಾಲಿಯನ್ ವ್ಯಾನಿಟಿ ಫೇರ್ ಮ್ಯಾಗಜೀನ್‌ಗೆ ವಿವಸ್ತ್ರಳಾಗಿ ಪೋಸ್ ಕೊಟ್ಟಳು. ಚಿತ್ರದ ಆಧಾರಿತ ಡಾಕ್ಯುಮೆಂಟರಿ ಚಿತ್ರ ನಲ್ಲಿ ಆಕೆ ಹೀಗೆ ಹೇಳಿದ್ದಾಳೆ : " ನನಗೆ ಎಲ್ಲ ಧರ್ಮಗಳಲ್ಲಿ ಆಸಕ್ತಿ ಹಾಗೂ ಗೌರವ ಇದೆ ಆದರೂ ನಾನು ಒಬ್ಬ ಅಜ್ಞೇಯತಾವಾದಿ" ನಾನು ನಂಬುವ ವಿಷಯವೆಂದರೆ, ಅತೀಂದ್ರಿಯ ಶಕ್ತಿ; ಮಹಾಸಾಗರಗಳಲ್ಲಿ ಉಬ್ಬರಗಳ ಸಮಯದಲ್ಲಿ ಶಕ್ತಿ ತುಂಬುವ ನಿಸರ್ಗದ ಕೊಡುಗೆಗಳು ಮತ್ತು ಪ್ರಾಣಿಗಳು." == ಸಾಗಿ ಬಂದ ವೃತ್ತಿ ಮಾರ್ಗ == === ಮಾಡೆಲಿಂಗ್ === ಬೆಲೂಚಿ, ಎಲೈಟ್ ಮಾಡೆಲ್ ಮ್ಯಾನೇಜ್‌ಮೆಂಟ್ ಜೊತೆ ಸಹಿ ಹಾಕುವುದರೊಂದಿಗೆ ೧೯೮೮ರಲ್ಲಿ ಯೂರೋಪ್‌ನ ಫ್ಯಾಷನ್ ಕೇಂದ್ರವಾದ ಮಿಲನ್‌ಗೆ ಹೋದರು. ೧೯೮೯ರ ವೇಳೆಗೆ ಆಕೆ ಪ್ಯಾರಿಸ್‌ನ ಫ್ಯಾಷನ್ ಮಾಡೆಲ್ ಆಗಿ ಪ್ರಖ್ಯಾತಿಯಾದಳು ಮತ್ತು ನ್ಯೂಯಾರ್ಕ್ ಸಿಟಿಯ ಅಟ್ಲಾಂಟಿಕ್‌ನಲ್ಲೆಲ್ಲಾ ಹೆಸರು ಮಾಡಿದರು. & ಮತ್ತು ಫ್ರೆಂಚ್‌ನ , ಇತರರ ಜೊತೆಗೂಡಿ ಭಂಗಿಗಳನ್ನು ನೀಡಿದರು. ಆ ವರ್ಷದಲ್ಲಿ, ಬೆಲೂಚಿಯು ಅಭಿನಯವನ್ನು ಪ್ರಾರಂಭಿಸುವುದರೊಂದಿಗೆ ಅಭಿನಯದ ತರಗತಿಗಳನ್ನೂ ತೆಗೆದುಕೊಳ್ಳಲು ಪ್ರಾರಂಭಿಸಿದರು. ೨೦೦೧ರ ಫೆಬ್ರವರಿ ೨೦೦೧ರಲ್ಲಿ ಎಸ್ಕ್ವೇರ್‌ ಮ್ಯಾಗಜೀನ್‌ನ ಮುಖಪುಟದಲ್ಲಿ ಬೆಲೂಚಿಯವರ ಚಿತ್ರದೊಂದಿಗೆ ಅದರಲ್ಲಿ ವಿವರಣೆ ಪ್ರಕಟವಾಯಿತು ಹಾಗೂ ಐದು ಇಂದ್ರಿಯಗಳ ಲೇಖನದಲ್ಲಿ ಸಹ ಆಕೆಯ ಬಗೆಗೆ ನಿರೂಪಿಸಲಾಗಿದೆ. ೨೦೦೩ರಲ್ಲಿ, ಮ್ಯಾಕ್ಸಿಮ್‌ ಮ್ಯಾಗಜೀನ್‌ನಲ್ಲಿ ಕೂಡ ಆಕೆಯ ವೈಶಿಷ್ಟ್ಯತೆಯ ಬಗ್ಗೆ ಪ್ರಕಟವಾಗಿದೆ. ೨೦೦೪ರಲ್ಲಿ, ಆಸ್ಕ್‌ಮೆನ್‌'ಗಳ ಆಯ್ಕೆ ಪಟ್ಟಿಯಲ್ಲಿ ಪ್ರಪಂಚ ಸುಂದರ ೧೦೦ ಯುವತಿಯರಲ್ಲಿ ಮೊದಲ ಸ್ಥಾನ ಪಡೆದರು. ನ್ಯೂಯಾರ್ಕ್ ನಗರದಲ್ಲಿ ಬೆಲೂಚಿಯವರ ಮಾಡೆಲಿಂಗ್ ವೃತ್ತಿಯನ್ನು ನ್ಯೂಯಾರ್ಕ್ ನಗರದ ೦}+ ಕಂಪನಿಯು ನಿರ್ವಹಿಸುತ್ತದೆ. ಆಕೆಯನ್ನು ಇಟಾಲಿಯನ್ ಸೆಕ್ಸ್ ಸಿಂಬಲ್ ಎಂದು ಪರಿಗಣಿಸಲಾಗುತ್ತಿತ್ತು. ಪ್ರಸ್ತುತ ಆಕೆ ಕಾಸ್ಮೆಟಿಕ್ಸ್‌‌ನ ರೂಪದರ್ಶಿ ಯಾಗಿದ್ದಾರೆ. ಬೆಲೂಚಿಯು ಲಂಡನ್‌ನ ಸ್ಟಾರ್ಮ್ ಮಾಡೆಲ್ ಮ್ಯಾನೆಜ್‌ಮೆಂಟ್‌ಗೆ ಕೂಡಾ ಸಹಿ ಹಾಕಿದ್ದಾರೆ .' === ಸಿನಿಮಾ === ಬೆಲೂಚಿಯವರ ಚಲನಚಿತ್ರ ವೃತ್ತಿಜೀವನ ೧೯೯೦ರ ಪ್ರಾರಂಭದಲ್ಲಿ ಆರಂಭಗೊಂಡಿತು. (೧೯೯೧) ಹಾಗೂ ' (೧೯೯೨)ನಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದಳು. ' ಚಿತ್ರದ ಲಿಸಾ ಪಾತ್ರಕ್ಕೆ ೧೯೯೬ರಲ್ಲಿ ಉತ್ತಮ ಸಹನಟಿ ಸೆಸರ್ ಅವಾರ್ಡ್‌ಗೆ ನಾಮನಿರ್ದೇಶನಗೊಂಡಳು ಮತ್ತು ಅದರಿಂದ ನಟಿಯಾಗಿ ಆಕೆಯ ಸ್ಥಾನವು ಚಿತ್ರಜಗತ್ತಿನಲ್ಲಿ ಬಲವಾಯಿತು. ಆಕೆಯು ವಿಶ್ವಾದಾದ್ಯಂತ ಪ್ರೇಕ್ಷಕರಲ್ಲಿ ಮಲೆನಾ (೨೦೦೦) ಚಿತ್ರದ ಪಾತ್ರದಿಂದ ಚಿರಪರಿಚಿತವಾದಳು ಮತ್ತು ಯೂರೋಪ್‌ನ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದಳು ಮತ್ತು ಹಾಲಿವುಡ್‌ನ ಚಿತ್ರಗಳಾದ ಟಿಯರ್ಸ್ ಆಫ್ ದಿ ಸನ್ (೨೦೦೩), ದಿ ಮ್ಯಾಟ್ರಿಕ್ಸ್ ರಿಲೋಡೆಡ್ (೨೦೦೩), ದಿ ಪ್ಯಾಶನ್ ಆಫ್ ದಿ ಕ್ರಿಸ್ಟ್ (೨೦೦೪), ದಿ ಬ್ರದರ್ಸ್ ಗ್ರಿಮ್ (೨೦೦೫), Deuxième (೨೦೦೭), ಡೋಂಟ್ ಲುಕ್ ಬ್ಯಾಕ್ (೨೦೦೯), ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದಳು. ಇಂಡಿಯಾದ ರಾಜಕಾರಣಿ ಸೋನಿಯಾ ಗಾಂಧಿ ಜೀವನಚರಿತ್ರೆ ಆಧರಿಸಿದ ೨೦೦೭ರಲ್ಲಿ ಬಿಡುಗಡೆಯಾಗಬೇಕಿದ್ದ ಸೋನಿಯಾ ಚಿತ್ರದಲ್ಲಿ ಆಕೆ ಮುಖ್ಯಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ನಂತರದಲ್ಲಿ ಕೈಬಿಡಲಾಯಿತು. ಫ್ರೆಂಚ್ ಮತ್ತು ಇಟಾಲಿಯನ್ ಭಾಷೆಗಳಲ್ಲಿ ಬಿಡುಗಡೆಯಾದ ' (೨೦೦೭) ಚಿತ್ರಕ್ಕಾಗಿ ಬೆಲೂಚಿ ತನ್ನ ಸ್ವಂತ ಧ್ವನಿಯನ್ನು ನೀಡಿದಳು. ಅಲ್ಲದೆ ವೀಡಿಯೋ ಗೇಮ್ ಕೈಲೀನಾ ಗಾಗಿ ತನ್ನ ಧ್ವನಿಯನ್ನು ನೀಡಿದಳು, ಹಾಗೂ ೨೦೦೫ರ ಅನಿಮೇಟೆಡ್ ಚಿತ್ರ ರೊಬೋಟ್ಸ್‌ನ ಫ್ರೆಂಚ್ ಅನುವಾದಕ್ಕಾಗಿ ಧ್ವನಿ ನೀಡಿದ್ದಾಳೆ. === ಪ್ರಶಸ್ತಿಗಳು ಮತ್ತು ಇತರೆ === ೨೦೦೩ರಲ್ಲಿ ಉತ್ತಮ ಸಹ ನಟಿ ಪ್ರಶಸ್ತಿ 'Argentoವನ್ನು ತನ್ನ , ಚಿತ್ರದಲ್ಲಿನ ಅಲೆಶಿಯಾ ಪಾತ್ರಕ್ಕಾಗಿ ಗಳಿಸಿದರು. ೨೦೦೬ರಲ್ಲಿ, ೫೯ನೆಯ . ೨೦೦೯ರ ವುಮೆನ್ಸ್ ವರ್ಲ್ಡ್ ಅವಾರ್ಡ್‌ ನಲ್ಲಿ ವಿಶ್ವದ ನಟಿ ಪ್ರಶಸ್ತಿ ಗಳಿಸಿದಳು. == ಚಲನಚಿತ್ರಗಳ ಪಟ್ಟಿ == == ಆಕರಗಳು == == ಹೊರಗಿನ ಕೊಂಡಿಗಳು == ಟೆಂಪ್ಲೇಟು: ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಮೋನಿಕಾ ಬೆಲೂಚಿ & ಟೆಂಪ್ಲೇಟು: ! ಟೆಂಪ್ಲೇಟು:1990-1999SISwimsuit